Google Play Instant Apps ಅನ್ನು ಬಳಸಿ

Play Store ನಿಂದ, Google Play Instant ಅನ್ನು ಬಳಸಿಕೊಂಡು ನಿಮ್ಮ ಸಾಧನದಲ್ಲಿ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡದೆಯೇ ನೀವು ಅವುಗಳನ್ನು ಬಳಸಬಹುದು.

ತ್ವರಿತ ಆ್ಯಪ್‌ಗಳನ್ನು ಬಳಸಿ 

Google Play Instant Apps ಹೇಗೆ ಕಾರ್ಯನಿರ್ವಹಿಸುತ್ತವೆ

ನೀವು ಲಿಂಕ್ ಅನ್ನು ಟ್ಯಾಪ್ ಮಾಡಿದಾಗ, ಲಿಂಕ್ ಅನ್ನು ತೆರೆಯಬಹುದಾದ ಆ್ಯಪ್ ಇದೆಯೇ ಎಂದು Google Play ಪರಿಶೀಲಿಸುತ್ತದೆ. ನಿಮ್ಮ ಸಾಧನದಲ್ಲಿ ನೀವು ಈಗಾಗಲೇ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿರದಿದ್ದರೆ ಅದು ತ್ವರಿತ ಆ್ಯಪ್‌ನಲ್ಲಿ (ಲಭ್ಯವಿದ್ದಲ್ಲಿ) ಲಿಂಕ್ ಅನ್ನು ತೆರೆಯುತ್ತದೆ. 
ತ್ವರಿತ ಆ್ಯಪ್ ಪ್ರಸ್ತುತ ಕ್ರಿಯೆಯನ್ನು ನಿರ್ವಹಿಸಲು ಅಗತ್ಯವಿರುವ ಆ್ಯಪ್‌ನ ಭಾಗಗಳನ್ನು ಮಾತ್ರ ಲೋಡ್ ಮಾಡುತ್ತದೆ. ಆ್ಯಪ್‌ನ ಭಾಗಗಳು ಮತ್ತು ಅವು ಸಂಗ್ರಹಿಸುವ ಯಾವುದೇ ಡೇಟಾವನ್ನು ಸಾಧನಕ್ಕೆ ತಾತ್ಕಾಲಿಕವಾಗಿ ಸೇರಿಸಲಾಗುತ್ತದೆ. ಆ ಡೇಟಾವನ್ನು ತೆಗೆದುಹಾಕಲು, ಕೆಳಗಿನ "ನಿರ್ದಿಷ್ಟ ತ್ವರಿತ ಆ್ಯಪ್‌ಗಾಗಿ ಡೇಟಾವನ್ನು ತೆರವುಗೊಳಿಸಿ" ಅನ್ನು ನೋಡಿ. 
ಗಮನಿಸಿ: ನೀವು ಯಾವುದೇ ಸಮಯದಲ್ಲಿ Google Play Instant Apps ಅನ್ನು ಆಫ್ ಮಾಡಬಹುದು. ಮೇಲಿನ "ತ್ವರಿತ ಆ್ಯಪ್‌ಗಳನ್ನು ಆನ್ ಅಥವಾ ಆಫ್ ಮಾಡಿ" ಎಂಬುದರ ಅಡಿಯಲ್ಲಿ ಸೂಚನೆಗಳನ್ನು ಅನುಸರಿಸಿ. 

ನಿಮ್ಮ ಇತ್ತೀಚಿನ ತ್ವರಿತ ಆ್ಯಪ್‌ಗಳನ್ನು ನೋಡಿ

ನೀವು ಇತ್ತೀಚೆಗೆ ಯಾವ ತ್ವರಿತ ಆ್ಯಪ್‌ಗಳನ್ನು ಬಳಸಿದ್ದೀರಿ ಎಂಬುದನ್ನು ನೀವು ನೋಡಬಹುದು:
  1. ನಿಮ್ಮ ಸಾಧನದಲ್ಲಿ, ಸೆಟ್ಟಿಂಗ್‌ಗಳ ಆ್ಯಪ್ ಅನ್ನು ತೆರೆಯಿರಿ ಸೆಟ್ಟಿಂಗ್‌ಗಳು.
  2. Google Google SearchನಂತರInstant Apps ಗೆ ಹೋಗಿ.
  3. ಅದರ ಬಳಕೆಯ ಕುರಿತು ಹೆಚ್ಚಿನ ವಿವರಗಳನ್ನು ನೋಡಲು ಯಾವುದೇ ಆ್ಯಪ್ ಅನ್ನು ಟ್ಯಾಪ್ ಮಾಡಿ. ನೀವು ಬಳಸಿದ ತ್ವರಿತ ಆ್ಯಪ್‌ಗಳು ನಿಮ್ಮ ಫೋನ್‌ನ ಅವಲೋಕನ ಮೆನುವಿನಲ್ಲಿರುವ ಇತ್ತೀಚಿನ ಆ್ಯಪ್‌ಗಳ ಪಟ್ಟಿಯಲ್ಲಿ ಸಹ ಗೋಚರಿಸುತ್ತವೆ .

ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿ

ನಿಮ್ಮ ಸಾಧನದಲ್ಲಿ ಇನ್‌ಸ್ಟಾಲ್ ಮಾಡದೆಯೇ ನೀವು ತ್ವರಿತ ಆ್ಯಪ್ ಅನ್ನು ಬಳಸಬಹುದು. ನೀವು ಆ್ಯಪ್ ಅನ್ನು ನಿಯಮಿತವಾಗಿ ಬಳಸಲು ಬಯಸಿದರೆ ಅಥವಾ ಆ್ಯಪ್ ಅನ್ನು ಆಫ್‌ಲೈನ್‌ನಲ್ಲಿ ಬಳಸಲು ಬಯಸಿದರೆ, ನೀವು ಅದನ್ನು ಇನ್‌ಸ್ಟಾಲ್ ಮಾಡಬಹುದು. ಅದನ್ನು Play Store ನಲ್ಲಿ ಹುಡುಕಿ ಅಥವಾ ತ್ವರಿತ ಆ್ಯಪ್‌ಗಳ ಮೆನುವಿನಲ್ಲಿ ನೋಡಿ:  

ಅದನ್ನು Google Play Store ಮೂಲಕ ಇನ್‌ಸ್ಟಾಲ್ ಮಾಡಿ

  1. Google Play Store ಆ್ಯಪ್ Google Play ಅನ್ನು ತೆರೆಯಿರಿ.
    • ಗಮನಿಸಿ: ನೀವು play.google.com ಗೆ ಸಹ ಹೋಗಬಹುದು. 
  2. ಆ್ಯಪ್‌ಗಾಗಿ ಹುಡುಕಿ ಅಥವಾ ಬ್ರೌಸ್ ಮಾಡಿ. 
  3. ಅದನ್ನು ಆಯ್ಕೆ ಮಾಡಿ.
  4. ಇನ್‌ಸ್ಟಾಲ್ ಅನ್ನು ಟ್ಯಾಪ್‌ ಮಾಡಿ.
  5. ನಿಮ್ಮ ಸಾಧನದಲ್ಲಿ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.  

ತ್ವರಿತ ಆ್ಯಪ್‌ಗಳ ಮೆನುವಿನಿಂದ ಅದನ್ನು ಇನ್‌ಸ್ಟಾಲ್ ಮಾಡಿ

  1. ನಿಮ್ಮ ಸಾಧನದಲ್ಲಿ, ಸೆಟ್ಟಿಂಗ್‌ಗಳ ಆ್ಯಪ್ ಅನ್ನು ತೆರೆಯಿರಿ ಸೆಟ್ಟಿಂಗ್‌ಗಳು.
  2. Google Google SearchನಂತರInstant Apps ಗೆ ಹೋಗಿ.
  3. ನೀವು ಇನ್‌ಸ್ಟಾಲ್ ಮಾಡಲು ಬಯಸುವ ಆ್ಯಪ್ ಅನ್ನು ಟ್ಯಾಪ್ ಮಾಡಿ. 
  4. ಇನ್‌ಸ್ಟಾಲ್ ಅನ್ನು ಟ್ಯಾಪ್ ಮಾಡಿ. 
  5. ನಿಮ್ಮ ಸಾಧನದಲ್ಲಿ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ. 

ನಿರ್ದಿಷ್ಟ ತ್ವರಿತ ಆ್ಯಪ್‌ಗಾಗಿ ಡೇಟಾವನ್ನು ತೆರವುಗೊಳಿಸಿ

ನೀವು ಬಳಸಿದ ತ್ವರಿತ ಆ್ಯಪ್‌ಗಾಗಿ ನೀವು ಡೇಟಾವನ್ನು ತೆರವುಗೊಳಿಸಬಹುದು:

  1. ನಿಮ್ಮ ಸಾಧನದಲ್ಲಿ, ಸೆಟ್ಟಿಂಗ್‌ಗಳ ಆ್ಯಪ್ ಅನ್ನು ತೆರೆಯಿರಿ ಸೆಟ್ಟಿಂಗ್‌ಗಳು.
  2. Google Google SearchನಂತರInstant Apps ಗೆ ಹೋಗಿ.
  3. ನೀವು ಸೆಟ್ಟಿಂಗ್ ಅನ್ನು ಬದಲಾಯಿಸಲು ಬಯಸುವ ತ್ವರಿತ ಆ್ಯಪ್ ಅನ್ನು ಟ್ಯಾಪ್ ಮಾಡಿ.
  4. ಆ್ಯಪ್ ಡೇಟಾವನ್ನು ತೆರವುಗೊಳಿಸಿ ಅನ್ನು ಟ್ಯಾಪ್ ಮಾಡಿ. 

ಸಲಹೆ: ನಿಮ್ಮ Google ಖಾತೆಗೆ ನೀವು ಕನೆಕ್ಟ್ ಮಾಡಿರುವ ಆ್ಯಪ್‌ಗಳನ್ನು ನಿರ್ವಹಿಸಲು ನಿಮ್ಮ ಖಾತೆಯ ಪುಟಕ್ಕೆ ಹೋಗುವುದನ್ನು ಸಹ ನೀವು ಬಯಸಬಹುದು. ನೀವು ಡೆವಲಪರ್‌ನೊಂದಿಗೆ ಹಂಚಿಕೊಂಡ ಯಾವುದೇ ಮಾಹಿತಿಯು ಡೆವಲಪರ್‌ನ ಗೌಪ್ಯತೆ ನೀತಿಗೆ ಒಳಪಟ್ಟಿರುತ್ತದೆ ಎಂಬುದನ್ನು ಗಮನಿಸಿ, ಆದ್ದರಿಂದ ನೀವು ಈ ಮಾಹಿತಿಯನ್ನು ನಿರ್ವಹಿಸಲು ಬಯಸಿದರೆ ಡೆವಲಪರ್ ಅನ್ನು ಸಂಪರ್ಕಿಸಿ. 

ತ್ವರಿತ ಆ್ಯಪ್‌ಗಳಿಗೆ ಅನುಮತಿಗಳನ್ನು ನಿರ್ವಹಿಸಿ

ಇನ್‌ಸ್ಟಾಲ್ ಮಾಡಿದ ಆ್ಯಪ್‌ನಂತೆಯೇ ತ್ವರಿತ ಆ್ಯಪ್‌ಗಾಗಿ ನೀವು ಈಗಲೂ ಅನುಮತಿಗಳನ್ನು ಮತ್ತು ನಿಮ್ಮ ಮಾಹಿತಿಗೆ ಆ್ಯಕ್ಸೆಸ್ ಅನ್ನು ನಿಯಂತ್ರಿಸುತ್ತೀರಿ. ನಿಮ್ಮ ಅನುಮತಿಗಳನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಿ. 

ತ್ವರಿತ ಆ್ಯಪ್‌ಗಳಿಗೆ ಸಂಬಂಧಿಸಿದ ಸಹಾಯ

Google Play Instant Apps ಗೆ ಸಂಬಂಧಿಸಿದಂತೆ ನೀವು ಸಮಸ್ಯೆಗಳನ್ನು ಹೊಂದಿದ್ದರೆ, ಸಹಾಯವನ್ನು ಪಡೆಯಿರಿ ಮತ್ತು ಸಮಸ್ಯೆಯನ್ನು ಟ್ರಬಲ್‌ಶೂಟ್ ಮಾಡಿ.
 

Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9368490242150752085
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
84680
false
false