ಇದು ನಮ್ಮ ಸೇವಾ ನಿಯಮಗಳ ಒಂದು ಆರ್ಕೈವ್ ಮಾಡಲಾದ ಆವೃತ್ತಿಯಾಗಿದೆ. ಪ್ರಸ್ತುತ ಆವೃತ್ತಿ ಅಥವಾ ಎಲ್ಲ ಹಿಂದಿನ ಆವೃತ್ತಿಗಳನ್ನು ವೀಕ್ಷಿಸಿ.

Google ಸೇವಾ ನಿಯಮಗಳು

ಕೊನೆಯ ಬಾರಿ ಮಾರ್ಪಡಿಸಿರುವುದು: 30 ಎಪ್ರಿಲ್ 2014 (ಆರ್ಕೈವ್ ಮಾಡಲಾದ ಆವೃತ್ತಿಗಳನ್ನು ವೀಕ್ಷಿಸಿ)

Google ಗೆ ಸುಸ್ವಾಗತ!

ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು (“ಸೇವೆಗಳು”) ಬಳಸುತ್ತಿರುವುದಕ್ಕೆ ಧನ್ಯವಾದಗಳು . Google Inc. (“Google”), ನಿಂದ ಒದಗಿಸಲಾದ ಸೇವೆಗಳು 1600 Amphitheatre Parkway, Mountain View, CA 94043, United States ಗಳಲ್ಲಿ ನೆಲೆಸಿವೆ.

ನಮ್ಮ ಸೇವೆಗಳನ್ನು ಬಳಸುವುದರ ಮೂಲಕ, ನೀವು ಈ ನಿಯಮಗಳನ್ನು ಒಪ್ಪಿಗೆ ಸೂಚಿಸಿರುತ್ತೀರಿ. ಅವುಗಳನ್ನು ಜಾಗರೂಕತೆಯಿಂದ ಓದಿ.

ನಮ್ಮ ಸೇವೆಗಳು ಬಹಳ ವಿಭಿನ್ನವಾಗಿವೆ, ಆದ್ದರಿಂದ ಕೆಲವೊಮ್ಮೆ ಹೆಚ್ಚುವರಿ ನಿಯಮಗಳು ಅಥವಾ ಉತ್ಪನ್ನ ಅವಶ್ಯಕತೆಗಳು (ವಯಸ್ಸಿನ ಅವಶ್ಯಕತೆಗಳನ್ನು ಒಳಗೊಂಡಂತೆ) ಅನ್ವಯವಾಗಬಹುದು. ಅನ್ವಯವಾಗುವ ಸೇವೆಗಳು ಸಂಬಂಧಿತ ಸೇವೆಗಳೊಂದಿಗೆ ಲಭ್ಯವಿರುತ್ತವೆ, ಮತ್ತು ಆ ಸೇವೆಗಳನ್ನು ನೀವು ಬಳಸಿದಲ್ಲಿ ಆ ಹೆಚ್ಚುವರಿ ನಿಯಮಗಳು ನಂತರ ನೀವು ನಮ್ಮೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಒಂದು ಭಾಗವಾಗಿರುತ್ತವೆ.

ನಮ್ಮ ಸೇವೆಗಳ ಬಳಕೆ

ಸೇವೆಗಳಿಗೆ ಸಂಬಂಧಿಸಿದಂತೆ ನಿಮಗೆ ಲಭ್ಯವಿರುವ ಎಲ್ಲಾ ನೀತಿಗಳನ್ನೂ ನೀವು ಅನುಸರಿಸಲೇಬೇಕು.

ನಮ್ಮ ಸೇವೆಗಳನ್ನು ದುರುಪಯೋಗಪಡಿಸದಿರಿ. ಉದಾಹರಣೆಗೆ, ನಮ್ಮ ಸೇವೆಗಳೊಂದಿಗೆ ಹಸ್ತಕ್ಷೇಪ ಮಾಡದಿರಿ ಅಥವಾ ನಾವು ಒದಗಿಸಿರುವ ಇಂಟರ್‌ಫೇಸ್ ಮತ್ತು ಸೂಚನೆಗಳನ್ನು ಹೊರತುಪಡಿಸಿ ಬೇರೆ ವಿಧಾನವನ್ನು ಬಳಸಿ ಅವುಗಳನ್ನು ಪ್ರವೇಶಿಸಲು ಪ್ರಯತ್ನಿಸದಿರಿ. ಅನ್ವಯವಾಗಬಹುದಾದ ರಫ್ತುಗಳು ಮತ್ತು ಮರು-ರಫ್ತುಗೊಂಡಿರುವ ನಿಯಂತ್ರಣ ಕಾನೂನುಗಳು ಮತ್ತು ಷರತ್ತುಗಳನ್ನು ಒಳಗೊಂಡಿರುವ, ಕಾನೂನಿನಿಂದ ಮಾತ್ರ ಅನುಮತಿಸಲಾದ ನಮ್ಮ ಸೇವೆಗಳನ್ನು ನೀವು ಬಳಸಬಹುದು. ನೀವು ನಮ್ಮ ನಿಯಮಗಳು ಅಥವಾ ನೀತಿಗಳಿಗೆ ಬದ್ಧವಾಗಿರದೇ ಇದ್ದಲ್ಲಿ ಹಾಗೂ ಅನುಚಿತ ವರ್ತನೆಗೆ ಸಂಬಂಧಿಸಿದಂತೆ ಯಾವುದಾದರೂ ತನಿಖೆಯನ್ನು ನಾವು ಕೈಗೆತ್ತಿಕೊಂಡಿದ್ದಲ್ಲಿ ನಾವು ಈಗಾಗಲೇ ನಿಮಗೆ ಒದಗಿಸುತ್ತಿರುವ ನಮ್ಮ ಸೇವೆಗಳನ್ನು ನಾವು ರದ್ದುಗೊಳಿಸಬಹುದು ಅಥವಾ ಪೂರೈಕೆಯನ್ನು ಸ್ಥಗಿತಗೊಳಿಸಬಹುದು.

ನಮ್ಮ ಸೇವೆಗಳ ಬಳಕೆಯ ಮಾತ್ರದಿಂದಲೇ ನೀವು ಬಳಸುವ ಯಾವುದೇ ಸೇವೆಯ ಮಾಲೀಕತ್ವವನ್ನಾಗಲೀ, ಅದರ ಅದರಲ್ಲಿನ ವಿಷಯದ ಬೌದ್ಧಿಕ ಆಸ್ತಿ ಹಕ್ಕುಗಳನ್ನಾಗಲೀ ನಿಮಗೆ ನೀಡಲಾಗುವುದಿಲ್ಲ. ನೀವು ಮಾಲೀಕರ ಅನುಮತಿ ಪಡೆದುಕೊಳ್ಳದ ಹೊರತು ಅಥವಾ ಕಾನೂನು ರೀತ್ಯ ಅನುಮತಿಯನ್ನು ಪಡೆಯದ ಹೊರತು ನಮ್ಮ ಸೇವೆಗಳ ವಿಷಯವನ್ನು ಬಳಸುವ ಹಕ್ಕು ನಿಮಗಿರುವುದಿಲ್ಲ. ಈ ನಿಯಮಗಳು ನಮ್ಮ ಸೇವೆಗಳಲ್ಲಿ ಯಾವುದೇ ಬ್ರಾಂಡ್‌‌‌ನ್ನು ಅಥವಾ ಲೋಗೊಗಳನ್ನು ಬಳಸುವ ಹಕ್ಕನ್ನು ನೀಡುವುದಿಲ್ಲ. ನಮ್ಮ ಸೇವೆಗಳಲ್ಲಿ ಪ್ರದರ್ಶಿತಗೊಳ್ಳುವ ಯಾವುದೇ ಕಾನೂನು ಸಂಬಂಧಿ ಅಧಿಸೂಚನೆಗಳನ್ನು ಯಾವ ಕಾರಣಕ್ಕೂ ತೆಗೆದು ಹಾಕಬೇಡಿ, ಅದನ್ನು ಅಸ್ಪಷ್ಟಗೊಳಿಸಬೇಡಿ ಅಥವಾ ಅದನ್ನು ಸ್ಥಳಾಂತರಿಸಬೇಡಿ.

ನಮ್ಮ ಸೇವೆಗಳು ಕೆಲವೊಮ್ಮೆ Google ಗೆ ಸಂಬಂಧವೇ ಇಲ್ಲದ ಕೆಲವು ವಿಷಯಗಳನ್ನು ಪ್ರದರ್ಶಿಸುತ್ತವೆ. ಅಸ್ತಿತ್ವದಲ್ಲಿರುವ ಈ ವಿಷಯವನ್ನು ಲಭ್ಯವಾಗುವಂತೆ ಮಾಡುವುದೇ ಇದರ ಏಕೈಕ ಜವಾಬ್ದಾರಿಯಾಗಿದೆ. ಕಾನೂನುಬಾಹಿರ ಅಥವಾ ನಮ್ಮ ನೀತಿಗಳನ್ನು ಉಲ್ಲಂಘಿಸುವ ವಿಷಯವನ್ನು ನಾವು ಮರುಪರಿಶೀಲಿಸಬಹುದು ಮತ್ತು ನಾವು ಸಮಂಜಸವಾಗಿ ನಂಬಿರುವ ನೀತಿಗಳನ್ನು ಅಥವಾ ಕಾನೂನನ್ನು ಉಲ್ಲಂಘಿಸುವ ಪ್ರದರ್ಶಿತ ವಿಷಯವನ್ನು ನಾವು ತೆಗೆದುಹಾಕಬಹುದು ಅಥವಾ ತಿರಸ್ಕರಿಸಬಹುದು. ನಾವು ವಿಷಯವನ್ನು ಮರುಪರಿಶೀಲಿಸುತ್ತೇವೆ ಎನ್ನುವುದು ಅದರರ್ಥವಾಗಿರಬೇಕಿಲ್ಲ, ಆದ್ದರಿಂದ ನಾವು ಹಾಗೆ ಮಾಡುತ್ತೇವೆಂದು ದಯವಿಟ್ಟು ಭಾವಿಸದಿರಿ.

ನೀವು ಬಳಸುವ ಸೇವೆಗಳಿಗೆ ಸಂಬಂಧಿಸಿದಂತೆ, ನಾವು ಸೇವೆಯ ಪ್ರಕಟಣೆಗಳನ್ನು, ಆಡಳಿತಾತ್ಮಕ ಸಂದೇಶಗಳನ್ನು, ಮತ್ತು ಇತರ ಮಾಹಿತಿಯನ್ನು ನಿಮಗೆ ಕಳುಹಿಸಬಹುದು. ನೀವು ಈ ಬಗೆಯ ಕೆಲವು ಸಂವಾದಗಳಿಂದ ಹೊರಗಿರಬಹುದು.

ನಮ್ಮ ಕೆಲವು ಸೇವೆಗಳು ಮೊಬೈಲ್‌ ಸಾಧನಗಳಲ್ಲಿ ಲಭ್ಯ. ನಿಮ್ಮ ಏಕಾಗ್ರತೆಗೆ ಭಂಗ ತರುವ ಹಾಗೂ ಸಂಚಾರ ಅಥವಾ ಸುರಕ್ಷತಾ ಕಾನೂನು ನಿಯಮಗಳ ಪಾಲನೆಗೆ ಅಡ್ಡಿಯುಂಟು ಮಾಡುವ ಅಂತಹ ಸೇವೆಗಳನ್ನು ಬಳಸದಿರುವುದು ಒಳಿತು.

ನಿಮ್ಮ Google ಖಾತೆ

ನಮ್ಮ ಕೆಲವು ಸೇವೆಗಳನ್ನು ಬಳಸಲೋಸುಗ ನಿಮಗೆ ನಮ್ಮ Google ಖಾತೆಯ ಅವಶ್ಯಕತೆ ಇರಬಹುದು. ನಿಮ್ಮದೇ ಆದ Google ಖಾತೆಯನ್ನು ನೀವು ರಚಿಸಬಹುದು, ಅಥವಾ ನಿಮ್ಮ ಮಾಲೀಕರು ಅಥವಾ ಶಿಕ್ಷಣ ಸಂಸ್ಥೆಯವರು ನಿಮ್ಮ Google ಖಾತೆಯನ್ನು ನಿಮಗೆ ನಿಯೋಜಿಸಿರಬಹುದು. ನಿಮಗೆ ನಿರ್ವಾಹಕರಿಂದ ನಿಯೋಜಿಸಲಾಗಿರುವ Google ಖಾತೆಯನ್ನು ನೀವು ಬಳಸುತ್ತಿದ್ದರೆ, ಬೇರೆ ಅಥವಾ ಹೆಚ್ಚುವರಿ ನಿಯಮಗಳು ಅನ್ವಯವಾಗಬಹುದು ಮತ್ತು ನಿಮ್ಮ ನಿರ್ವಾಹಕರು ನಿಮ್ಮ ಖಾತೆಯನ್ನು ಪ್ರವೇಶಿಸಬಹುದು ಅಥವಾ ಅಶಕ್ತಗೊಳಿಸಬಹುದು.

ನಿಮ್ಮ Google ಖಾತೆಯ ರಕ್ಷಣೆಗೆ ನಿಮ್ಮ ಪಾಸ್‌ವರ್ಡ್‌ ಅನ್ನು ಗೌಪ್ಯವಾಗಿರಿಸಿ. ನಿಮ್ಮ Google ಖಾತೆಯಲ್ಲಿ ಅಥವಾ ಅದರ ಮೂಲಕ ನಡೆಯುವ ಚಟುವಟಿಕೆಗೆ ನೀವೇ ಜವಾಬ್ದಾರರಾಗಿರುತ್ತೀರಿ. ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳಲ್ಲಿ ನಿಮ್ಮ Google ಖಾತೆ ಪಾಸ್‌ವರ್ಡ್‌ ಅನ್ನು ಪದೇ ಪದೇ ಬಳಸದಿರಲು ಪ್ರಯತ್ನಿಸಿ. ನಿಮ್ಮ ಪಾಸ್‌ವರ್ಡ್‌ ಅಥವಾ Google ಖಾತೆಯ ಯಾವುದೇ ಅನಧಿಕೃತ ಬಳಕೆಯ ಬಗ್ಗೆ ನಿಮಗೆ ತಿಳಿದುಬಂದರೆ, ಈ ಸೂಚನೆಗಳನ್ನು ಅನುಸರಿಸಿ.

ಗೌಪ್ಯತೆ ಹಾಗೂ ಹಕ್ಕುಸ್ವಾಮ್ಯ ರಕ್ಷಣೆ

ನಾವು ಹೇಗೆ ನಿಮ್ಮ ವೈಯಕ್ತಿಕ ಡೇಟಾವನ್ನು ನಿರ್ವಹಿಸುತ್ತೇವೆ ಹಾಗೂ ನೀವು ನಮ್ಮ ಸೇವೆಗಳನ್ನು ಬಳಸುವಾಗ ಹೇಗೆ ನಿಮ್ಮ ಗೌಪ್ಯತೆಯನ್ನು ಸುರಕ್ಷಿತವಾಗಿಡುತ್ತೇವೆ ಎಂಬುದನ್ನು Google ಗೌಪ್ಯತೆ ನೀತಿಗಳು ಎಳೆಎಳೆಯಾಗಿ ನಿಮ್ಮೆದುರು ಬಿಚ್ಚಿಡುತ್ತವೆ. ನಮ್ಮ ಸೇವೆಯನ್ನು ಬಳಸುವುದರ ಮೂಲಕ, Google ನಮ್ಮ ಗೌಪ್ಯತಾ ನೀತಿಗಳಿಗೆ ಸಂಬಂಧಿಸಿದ ಕೆಲವು ಡೇಟಾವನ್ನು ಬಳಸಿಕೊಂಡಿದ್ದನ್ನು ನೀವು ಒಪ್ಪಿಕೊಂಡಿದ್ದಿರಿ.

ಯು.ಎಸ್.ಡಿಜಿಟಲ್ ಮಿಲೇನಿಯಮ್ ಹಕ್ಕುಸ್ವಾಮ್ಯ ಕಾಯಿದೆಯಲ್ಲಿ ಸೆಟ್ ಮಾಡಲಾದ ಹಂತಗಳಿಗನುಸಾರವಾಗಿ ಹಕ್ಕುಉಲ್ಲಂಘನೆಯ ಆಕ್ಷೇಪಾರ್ಹ ಸೂಚನೆಗಳನ್ನು ಮತ್ತು ಪುನರಾವರ್ತಿತ ಉಲ್ಲಂಘನೆಗಳ ಖಾತೆಗಳನ್ನು ಮುಕ್ತಾಯಗೊಳಿಸುವುದಕ್ಕೆ ನಾವು ಪ್ರತಿಕ್ರಿಯೆಸುತ್ತೇವೆ.

ಹಕ್ಕುಸ್ವಾಮ್ಯ ಹೊಂದಿರುವವರು ತಮ್ಮ ಬೌದ್ಧಿಕ ಆಸ್ತಿ ಆನ್‌ಲೈನ್ ಅನ್ನು ನಿರ್ವಹಿಸುವುದಕ್ಕೆ ಸಹಾಯವಾಗುವಂತೆ ನಾವು ಮಾಹಿತಿಯನ್ನು ಒದಗಿಸುತ್ತೇವೆ. ನಿಮ್ಮ ಹಕ್ಕುಸ್ವಾಮ್ಯಗಳನ್ನು ಯಾರಾದರೂ ಉಲ್ಲಂಘಿಸುತ್ತಿದ್ದಾರೆಂಬ ಅನುಮಾನ ನಿಮಗಿದ್ದರೆ ಅದನ್ನು ನಮಗೆ ಸೂಚಿಸಲು ಬಯಸಿದಲ್ಲಿ, ಸೂಚನೆಗಳನ್ನು ಸಲ್ಲಿಸುವುದು ಮತ್ತು ಸೂಚನೆಗಳಿಗೆ ಪ್ರತಿಕ್ರಿಯಿಸುವ Google ನ ನೀತಿಯ ಬಗ್ಗೆ ನಿಮಗೆ ಮಾಹಿತಿ ಬೇಕಿದ್ದರೆ ನಮ್ಮಸಹಾಯ ಕೇಂದ್ರದಲ್ಲಿಕಾಣಬಹುದು.

ನಮ್ಮ ಸೇವೆಗಳಲ್ಲಿ ನಿಮ್ಮ ವಿಷಯಗಳಿವೆ

ನಮ್ಮ ಕೆಲವೊಂದು ಸೇವೆಗಳು ವಿಷಯವನ್ನು ಅಪ್‌ಲೋಡ್ ಮಾಡಲು, ಸಲ್ಲಿಸಲು, ಸಂಗ್ರಹಿಸಲು, ಕಳುಹಿಸಲು ಇಲ್ಲವೇ ಸ್ವೀಕರಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ನೀವು ಆ ವಿಷಯದಲ್ಲಿ ಹೊಂದಿರುವ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳ ಮಾಲೀಕತ್ವವನ್ನು ನೀವು ಪಡೆದುಕೊಳ್ಳುತ್ತೀರಿ. ಸಂಕ್ಷಿಪ್ತವಾಗಿ, ನಿಮಗೆ ಸೇರಿರುವುದು ನಿಮ್ಮದೇ ಆಗಿರುತ್ತದೆ.

ನಮ್ಮ ಸೇವೆಗಳಿಗೆ ನೀವು ವಿಷಯವನ್ನು ಅಪ್‌ಲೋಡ್ ಮಾಡುವಾಗ, ಸಲ್ಲಿಸುವಾಗ, ಸಂಗ್ರಹಿಸುವಾಗ, ಕಳುಹಿಸುವಾಗ ಇಲ್ಲವೇ ಸ್ವೀಕರಿಸುವಾಗ, ಬಳಸಲು, ಹೋಸ್ಟ್ ಮಾಡಲು, ಸಂಗ್ರಹಿಸಲು, ಪುನರುತ್ಪಾದಿಸಲು, ಮಾರ್ಪಡಿಸಲು, ಉತ್ಪನ್ನ ಕಾರ್ಯಗಳನ್ನು ರಚಿಸಲು (ಅನುವಾದಗಳಿಂದ ಬಂದಿರುವ ಫಲಿತಾಂಶಗಳು, ಅನುವರ್ತನೆಗಳು ಅಥವಾ ನಾವು ಮಾಡುವ ಇತರ ಬದಲಾವಣೆಗಳಂತಹವುಗಳು, ಆದ್ದರಿಂದ ನಿಮ್ಮ ವಿಷಯವು ನಮ್ಮ ಸೇವೆಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ), ಸಂವಹಿಸಲು, ಪ್ರಕಟಿಸಲು, ಸಾರ್ವಜವಿಕವಾಗಿ ನಿರ್ವಹಿಸಲು, ಸಾರ್ವಜನಿಕವಾಗಿ ಪ್ರದರ್ಶಿಸಲು ಮತ್ತು ಕೆಲವು ವಿಷಯವನ್ನು ಹಂಚಲು ಜಗತ್ತಿನಾದ್ಯಂತವಿರುವ ಒಂದು ಪರವಾನಗಿಯನ್ನು (ಮತ್ತು ನಾವು ಕಾರ್ಯನಿರ್ವಹಿಸಿದವರೊಂದಿಗೆ) ನೀವು Google ಗೆ ನೀಡುತ್ತೀರಿ. ಈ ಪರವಾನಿಗೆಯಲ್ಲಿ ನೀವು ನೀಡಿರುವ ಹಕ್ಕುಗಳು ಆಪರೇಟಿಂಗ್, ಪ್ರಚಾರಪಡಿಸುವುದು, ನಮ್ಮ ಸೇವೆಗಳ ಸುಧಾರಣೆ ಹಾಗೂ ಹೊಸ ಸೇವೆಗಳನ್ನು ಅಭಿವೃದ್ಧಿಪಡಿಸುವಿಕೆ ಹೀಗೆ ಸೀಮಿತ ಉದ್ದೇಶಗಳಿಗೆ ಮಾತ್ರ ಮೀಸಲಾಗಿವೆ. ನಮ್ಮ ಸೇವೆಗಳನ್ನು ನೀವು ಬಳಸುವುದನ್ನು ನಿಲ್ಲಿಸಿದಾಗಲೂ ಸಹ (ಉದಾಹರಣೆಗೆ, Google ನಕ್ಷೆಗಳಿಗೆ ನೀವು ಸೇರ್ಪಡೆಗೊಳಿಸಿದ ವ್ಯಾಪಾರ ಪಟ್ಟಿಗಾಗಿ) ಈ ಪರವಾನಗಿಯು ಮುಂದುವರಿಯುತ್ತದೆ. ನಿಮಗೆ ಆ ಸೇವೆಗಳಿಗೆ ಒದಗಿಸಲಾಗಿದ್ದ ವಿಷಯವನ್ನು ಪ್ರವೇಶಿಸಲು ಮತ್ತು ತೆಗೆದುಹಾಕುವ ದಾರಿಯನ್ನು ಕೆಲವು ಸೇವೆಗಳು ಒದಗಿಸುತ್ತವೆ. ಅಲ್ಲದೆ, ನಮ್ಮ ಸೇವೆಗಳಲ್ಲಿ ಕೆಲವು, ನೀವು ಬಳಸುವುದನ್ನು ನಿಲ್ಲಿಸಿದಾಗಲೂ (ಉದಾಹರಣೆಗೆ, Google ನಕ್ಷೆಗಳಿಗೆ ನೀವು ಸೇರ್ಪಡೆಗೊಳಿಸಿದ ವ್ಯಾಪಾರ ಪಟ್ಟಿಗಾಗಿ). ಪರವಾನಗಿ ಮುಂದುವರಿಯುತ್ತದೆ. ನೀವು ನಮ್ಮ ಸೇವೆಗಳಿಗೆ ಸಲ್ಲಿಸುವ ಯಾವುದೇ ವಿಷಯಕ್ಕಾಗಿ ಈ ಪರವಾನಗಿಯನ್ನು ನಮಗೆ ನೀಡುವ ಆವಶ್ಯಕ ಹಕ್ಕುಗಳನ್ನು ನೀವು ಹೊಂದಿರುವಿರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಕಸ್ಟಮೈಸ್ ಮಾಡಿದ ಹುಡುಕಾಟ ಫಲಿತಾಂಶಗಳು, ಸೂಕ್ತ ಜಾಹೀರಾತು ಮತ್ತು ಸ್ಪ್ಯಾಮ್ ಹಾಗೂ ಮಾಲ್‌ವೇರ್ ಪತ್ತೆಹಚ್ಚುವಿಕೆಯ ರೀತಿಯ ವೈಯಕ್ತಿಕವಾಗಿ ಸೂಕ್ತ ಉತ್ಪನ್ನದ ವೈಶಿಷ್ಟ್ಯಗಳನ್ನು ನಿಮಗೆ ಒದಗಿಸುವ ಸಲುವಾಗಿ, ನಿಮ್ಮ ವಿಷಯವನ್ನು (ಇಮೇಲ್‌ಗಳು ಸೇರಿದಂತೆ) ನಮ್ಮ ಸ್ವಯಂಚಾಲಿತ ಸಿಸ್ಟಂಗಳು ವಿಶ್ಲೇಷಣೆ ಮಾಡಬಹುದು. ಈ ವಿಶ್ಲೇಷಣೆಯು ವಿಷಯವನ್ನು ಕಳುಹಿಸಿದಾಗ, ಸ್ವೀಕರಿಸಿದಾಗ ಮತ್ತು ಅದನ್ನು ಸಂಗ್ರಹಿಸಿಕೊಂಡಾಗ ಸಂಭವಿಸುತ್ತದೆ.

ನೀವು Google ಖಾತೆಯನ್ನು ಹೊಂದಿದ್ದರೆ, ಜಾಹೀರಾತುಗಳು ಮತ್ತು ಇತರ ವಾಣಿಜ್ಯ ಸಂದರ್ಭಗಳಲ್ಲಿ ಪ್ರದರ್ಶಿಸುವುದೂ ಸೇರಿದಂತೆ, ನಿಮ್ಮ ಪ್ರೊಫೈಲ್ ಹೆಸರು, ಪ್ರೊಫೈಲ್ ಫೋಟೋ ಮತ್ತು Google ನಲ್ಲಿ ಅಥವಾ ನಮ್ಮ ಸೇವೆಗಳಲ್ಲಿ ನಿಮ್ಮ Google ಖಾತೆಗೆ (ಇಷ್ಟವಾದವುಗಳು, ನೀವು ಬರೆಯುವ ವಿಮರ್ಶೆಗಳು ಹಾಗೂ ನೀವು ಪೋಸ್ಟ್ ಮಾಡುವ ಕಾಮೆಂಟ್‌ಗಳಂತಹವು) ಸಂಪರ್ಕಗೊಂಡಿರುವ ಮೂರನೇ-ವ್ಯಕ್ತಿಯ ಅಪ್ಲಿಕೇಶನ್‌ಗಳಲ್ಲಿ ನೀವು ತೆಗೆದುಕೊಳ್ಳುವ ಕ್ರಮಗಳನ್ನೂ ನಾವು ಪ್ರದರ್ಶಿಸಬಹುದು. ನಿಮ್ಮ Google ಖಾತೆಯಲ್ಲಿ ಹಂಚಿಕೆ ಮತ್ತು ಗೋಚರತೆ ಸೆಟ್ಟಿಂಗ್‌ಗಳನ್ನು ಸೀಮಿತವಾಗಿರಿಸಲು ನೀವು ತೆಗೆದುಕೊಳ್ಳುವ ಆಯ್ಕೆಗಳನ್ನು ನಾವು ಗೌರವಿಸುತ್ತೇವೆ. ಉದಾಹರಣೆಗೆ, ನೀವು ನಿಮ್ಮ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿಕೊಳ್ಳಬಹುದು ಇದರಿಂದ ಒಂದು ಜಾಹೀರಾತಿನಲ್ಲಿ ನಿಮ್ಮ ಹೆಸರು ಮತ್ತು ಫೋಟೋ ಕಾಣಿಸಿಕೊಳ್ಳುವುದಿಲ್ಲ.

ಗೌಪ್ಯತಾ ನೀತಿಯಲ್ಲಿರುವ ವಿಷಯ ಅಥವಾ ನಿರ್ದಿಷ್ಟ ಸೇವೆಗಳಿಗಿರುವ ಹೆಚ್ಚುವರಿ ನಿಯಮಗಳನ್ನು Google ಹೇಗೆ ಬಳಸುತ್ತದೆ ಮತ್ತು ಸಂಗ್ರಹಿಸುತ್ತದೆ ಎಂದುದರ ಬಗ್ಗೆ ನೀವು ಹೆಚ್ಚಿನ ಮಾಹಿತಿಯನ್ನು ಕಾಣಬಹುದು. ನಮ್ಮ ಸೇವೆಗಳ ಬಗ್ಗೆ ನೀವು ಪ್ರತಿಕ್ರಿಯೆ ಅಥವಾ ಸಲಹೆಗಳನ್ನು ಸಲ್ಲಿಸಿದಲ್ಲಿ, ನಿಮಗೆ ಹೊಣೆಗಾರಿಕೆ ಇಲ್ಲದೆ ನಿಮ್ಮ ಪ್ರತಿಕ್ರಿಯೆ ಅಥವಾ ಸಲಹೆಗಳನ್ನು ನಾವು ಬಳಸಬಹುದು.

ನಮ್ಮ ಸೇವೆಗಳಲ್ಲಿರುವ ಸಾಫ್ಟ್‌ವೇರ್ ಕುರಿತು

ಸೇವೆಗೆ ಅಗತ್ಯವಿರುವಾಗ ಅಥವಾ ಡೌ‌ನ್‌‌ಲೋಡ್ ಮಾಡಲು ಸಾಧ್ಯವಿರುವ ಸಾಫ್ಟ್‌ವೇರ್ ಅನ್ನು ಒಳಗೊಂಡಿರುವಾಗ, ಒಮ್ಮೆ ಹೊಸ ಆವೃತ್ತಿ ಅಥವಾ ವೈಶಿಷ್ಟ್ಯ ಲಭ್ಯವಾದಾಗ ಈ ಸಾಫ್ಟ್‌ವೇರ್ ನಿಮ್ಮ ಸಾಧನದಲ್ಲಿ ಸ್ವಯಂಚಾಲಿತವಾಗಿ ನವೀಕರಣಗೊಳ್ಳಬಹುದು. ನಿಮ್ಮ ಸ್ವಯಂಚಾಲಿತ ನವೀಕರಿಸಿದ ಸೆಟ್ಟಿಂಗ್‌ಗಳನ್ನು ಕೆಲವು ಸೇವೆಗಳು ಹೊಂದಿಸುತ್ತವೆ.

ಸೇವೆಗಳ ಒಂದು ಭಾಗವಾಗಿ Google ನಿಂದ ಒದಗಿಸಲಾದ ಸಾಪ್ಟ್‌ವೇರ್ ಅನ್ನು ಬಳಸಲು ವೈಯಕ್ತಿಕ, ಜಗತ್ತಿನಾದ್ಯಂತ, ಗೌರವಧನ, ನಿಯೋಜಿಸದಲ್ಲದ ಮತ್ತು ಪ್ರತ್ಯೇಕವಲ್ಲದ ಪರವಾನಿಗೆಯನ್ನು Google ನಿಮಗೆ ನೀಡುತ್ತದೆ. ನಿಯಮಗಳ ಅನುಮತಿಯ ಮೇರೆಗೆ Google ನಿಂದ ಒದಗಿಸಲಾದ ಸೇವೆಗಳ ಬಳಕೆ ಹಾಗೂ ಅದರ ಅನುಕೂಲದ ಅನುಭವವನ್ನು ನಿಮಗೆ ಲಭ್ಯವಾಗಿಸುವುದು ಈ ಪರವಾನಗಿಯ ಏಕಮಾತ್ರ ಉದ್ದೇಶವಾಗಿದೆ. ಕಾನೂನು ಆ ನಿರ್ಬಂಧಗಳನ್ನು ನಿಷೇಧಿಸದ ಹೊರತು ಅಥವಾ ನಮ್ಮ ಬರಹ ರೂಪದ ಅನುಮತಿಯನ್ನು ನೀವು ಹೊಂದದೆ ನಮ್ಮ ಸೇವೆಗಳಲ್ಲಿರುವ ಯಾವುದೇ ಭಾಗವನ್ನು ಅಥವಾ ಸೇರಿಸಲಾದ ಸಾಫ್ಟ್‌ವೇರ್ ಅನ್ನು ನೀವು ನಕಲಿಸುವುದಾಗಲಿ, ಮಾರ್ಪಡಿಸುವುದಾಗಲಿ, ಹಂಚುವುದಾಗಲಿ, ಮಾರಾಟಮಾಡುವುದಾಗಲಿ, ಅಥವಾ ಗುತ್ತಿಗೆಗೆ ನೀಡುವುದಾಗಲಿ, ನೀವು ರಚನೆಯನ್ನು ತಿರುಚುವುದಾಗಲಿ ಅಥವಾ ಆ ಸಾಫ್ಟ್‌ವೇರ್‌ಗೆ ಮೂಲ ಕೋಡ್ ಅನ್ನು ಸಂಗ್ರಹಿಸುವ ಪ್ರಯತ್ನ ಮಾಡುವುದಾಗಲಿ ಮಾಡಬಾರದು.

ತೆರೆದ ಮೂಲ ಸಾಫ್ಟ್‌ವೇರ್ ನಮಗೆ ತುಂಬಾ ಮುಖ್ಯವಾದುದು. ನಮ್ಮ ಸೇವೆಗಳಲ್ಲಿ ಬಳಸಿದ ಕೆಲವು ಸಾಫ್ಟ್‌ವೇರ್ ನಿಮಗೆ ಲಭ್ಯವಿರುವಂತೆ ನಾವು ಮಾಡಿರುವ ತೆರೆದ ಮೂಲ ಪರವಾನಿಗೆಯಡಿಯಲ್ಲಿ ಒದಗಿಸಬಹುದಾಗಿದೆ. ತೆರೆದ ಮೂಲ ಪರವಾನಿಗೆಯಡಿಯಲ್ಲಿ ಈ ಕೆಲವೊಂದು ನಿಯಮಗಳನ್ನು ಅತಿಕ್ರಮಿಸಲು ಅಲ್ಲಿ ಸೌಲಭ್ಯಗಳಿವೆ.

ನಮ್ಮ ಸೇವೆಗಳನ್ನು ಮಾರ್ಪಡಿಸುವುದು ಮತ್ತು ಕೊನೆಗೊಳಿಸುವುದು

ನಮ್ಮ ಸೇವೆಗಳನ್ನು ನಾವು ಸತತವಾಗಿ ಬದಲಿಸುತ್ತಲೇ ಇರುತ್ತೇವೆ ಮತ್ತು ಅಭಿವೃದ್ಧಿಪಡಿಸುತ್ತಲೇ ಇರುತ್ತೇವೆ. ಕಾರ್ಯನಿರ್ವಹಿಸುವಿಕೆಗಳು ಅಥವಾ ವೈಶಿಷ್ಟ್ಯಗಳನ್ನು ನಾವು ಸೇರಿಸಬಹುದು ಅಥವಾ ತೆಗೆಯಬಹುದು, ಮತ್ತು ಸೇವೆಗಳನ್ನು ನಾವು ಒಟ್ಟಿಗೆ ರದ್ದುಗೊಳಿಸಬಹುದು ಅಥವಾ ನಿಲ್ಲಿಸಬಹುದು.

ನಮ್ಮ ಸೇವೆಗಳನ್ನು ಬಳಸುವುದನ್ನು ನೀವು ಯಾವ ಸಮಯದಲ್ಲೂ ನಿಲ್ಲಿಸಬಹುದು, ಅದಾಗ್ಯೂ ನಿಮ್ಮ ನಿರ್ಗಮನಕ್ಕೆ ವಿಷಾದಿಸುತ್ತೇವೆ. ನಿಮಗೆ ಸೇವೆಗಳನ್ನು ಒದಗಿಸುವುದನ್ನು ಕೂಡ Google ನಿಲ್ಲಿಸಬಹುದು, ಅಥವಾ ಯಾವ ಸಮಯದಲ್ಲಾದರೂ ನಮ್ಮ ಸೇವೆಗಳಿಗೆ ಹೊಸ ಮಿತಿಗಳನ್ನು ಸೇರಿಸಬಹುದು ಅಥವಾ ರಚಿಸಬಹುದು.

ನಿಮ್ಮದೇ ಡೇಟಾವನ್ನು ನೀವು ಹೊಂದುವುದು ಮತ್ತು ಕೆಲವು ಡೇಟಾಕ್ಕೆ ನಿಮ್ಮ ಪ್ರವೇಶವನ್ನು ರಕ್ಷಿಸುವುದು ತುಂಬಾ ಮುಖ್ಯವಾದುದೆಂದು ನಾವು ನಂಬುತ್ತೇವೆ. ಯುಕ್ತವಾಗಿ ಸಾಧ್ಯವಾಗುವಲ್ಲಿ ನಾವು ಸೇವೆಯನ್ನು ನಿಲ್ಲಿಸಿದಲ್ಲಿ, ನ್ಯಾಯಬದ್ಧವಾದ ಮುಂಗಡ ಸೂಚನೆಯನ್ನು ಮತ್ತು ಆ ಸೇವೆಯ ಹೊರಗೆ ಮಾಹಿತಿಯನ್ನು ಪಡೆಯುವ ಅವಕಾಶವನ್ನು ನಾವು ನಿಮಗೆ ನೀಡುತ್ತೇವೆ.

ನಮ್ಮ ವಾರಂಟಿಗಳು ಮತ್ತು ಹಕ್ಕುನಿರಾಕರಣೆಗಳು

ವಾಣಿಜ್ಯಿಕ ಸಂಭಾವ್ಯ ಮಟ್ಟದ ನೈಪುಣ್ಯತೆ ಮತ್ತು ಕಾಳಜಿಯನ್ನು ಬಳಸಿಕೊಂಡು ನಮ್ಮ ಸೇವೆಗಳನ್ನು ನಾವು ಒದಗಿಸುತ್ತೇವೆ ಮತ್ತು ಅವುಗಳನ್ನು ಬಳಸಿಕೊಂಡು ನೀವು ಸಂತೋಷಪಡುತ್ತೀರೆಂದು ನಾವು ಭಾವಿಸುತ್ತೇವೆ. ನಮ್ಮ ಸೇವೆಗಳ ಬಗ್ಗೆ ನಾವು ಭರವಸೆ ನೀಡದಿರುವ ಕೆಲವೊಂದು ವಿಷಯಗಳಿವೆ.

ಈ ನಿಯಮಗಳಲ್ಲಿ ಅಥವಾ ಹೆಚ್ಚುವರಿ ನಿಯಮಗಳಲ್ಲಿ ಖಚಿತವಾಗಿ ನಿಗದಿಪಡಿಸಿರುವುದಿಲ್ಲ, Google ಇಲ್ಲವೇ ಅದರ ಪೂರೈಕೆದಾರರು ಅಥವಾ ವಿತರಕರು ಸೇವೆಗಳ ಬಗ್ಗೆ ಯಾವುದೇ ನಿರ್ದಿಷ್ಟ ಭರವಸೆಗಳನ್ನು ಮಾಡಬಹುದು. ಉದಾಹರಣೆಗೆ, ಸೇವೆಗಳಲ್ಲಿರುವ ವಿಷಯ, ಸೇವೆಗಳ ನಿರ್ದಿಷ್ಟ ವೈಶಿಷ್ಟ್ಯಗಳು, ಅಥವಾ ಅವರ ಪ್ರಮಾಣಿಕತನ, ಲಭ್ಯತೆ, ಅಥವಾ ನಿಮ್ಮ ಅವಶ್ಯಕತೆಗಳ ಮಟ್ಟದ ಸಾಮರ್ಥ್ಯಗಳ ಬಗ್ಗೆ ಯಾವುದೇ ಹೊಣೆಗಾರಿಕೆಗಳು ನಮಗಿರುವುದಿಲ್ಲ. ಸೇವೆಗಳನ್ನು “ಇದ್ದದ್ದು ಇದ್ದಂತೆ” ನಾವು ಒದಗಿಸುತ್ತೇವೆ.

ಷರತ್ತುಗಳಿಗೆ ಅನ್ವಯಿಸಲಾದ ವಾರಂಟಿ, ನಿರ್ದಿಷ್ಟ ಉದ್ದೇಶಕ್ಕಾಗಿ ಮತ್ತು ಉಲ್ಲಂಘನೆ ರಹಿತ ಅರ್ಹತೆಯಂತಹ ಕೆಲವು ಸಲಹಾಸೂತ್ರಗಳನ್ನು ನಿರ್ದಿಷ್ಟ ವಾರಂಟಿಗಳಿಗೆ ಒದಗಿಸಲಾಗಿದೆ. ಕಾನೂನು ಅನುಮತಿಸಿದ ಪ್ರಮಾಣದವರೆಗೆ, ಎಲ್ಲಾ ವಾರಂಟಿಗಳನ್ನು ನಾವು ಬಹಿಷ್ಕರಿಸುತ್ತೇವೆ.

ನಮ್ಮ ಸೇವೆಗಳಿಗಿರುವ ಬಾಧ್ಯತೆಗಳು

ಕಾನೂನಿನ ಮೂಲಕ ಅನುಮತಿಸಿದಾಗ Google, ಮತ್ತು Google ನ ಪೂರೈಕೆದಾರರು, ಹಾಗೂ ವಿತರಕರು ಕಳೆದುಹೋದ ಲಾಭಗಳಿಗೆ, ಆದಾಯಗಳಿಗೆ, ಅಥವಾ ಡೇಟಾ, ಆರ್ಥಿಕ ನಷ್ಟಗಳು ಅಥವಾ ಪರೋಕ್ಷ, ವಿಶೇಷ, ಪ್ರಾಸಂಗಿಕ, ಅನುಕರಣೀಯ, ಅಥವಾ ದಂಡ ವಿಧಿಸಬಹುದಾದ ಹಾನಿಗಳಿಗೆ ಜವಾಬ್ದಾರರಾಗಿರುವುದಿಲ್ಲ.

ಕಾನೂನು ಅನುಮತಿಸುವವರೆಗೆ, Google ನ ಮತ್ತು ಅದರ ಪೂರೈಕೆದಾರರು ಅಥವಾ ವಿತರಕರ ಒಟ್ಟು ಬಾಧ್ಯತೆಯು, ಈ ನಿಯಮಗಳಡಿಯಲ್ಲಾಗುವ ಯಾವುದೇ ಆರೋಪಗಳಿಗೆ ಸಂಬಂಧಿಸಿದ, ಯಾವುದೇ ಅನ್ವಯವಾಗುವ ವಾರಂಟಿಗಳು, ನೀವು ಸೇವೆಗಳನ್ನು ಬಳಸಲು ನಮಗೆ ಪಾವತಿಸಿದ ಮೊತ್ತಕ್ಕೆ ಸೀಮಿತವಾಗಿರುತ್ತದೆ (ಅಥವಾ, ನಿಮಗೆ ಸೇವೆಗಳನ್ನು ಪುನಃ ಪೂರೈಕೆ ಮಾಡುವುದನ್ನು ನಾವು ಆರಿಸಿದಲ್ಲಿ)

ಸಮಂಜಸವಾಗಿ ನಿರೀಕ್ಷಿತವಲ್ಲದ ಯಾವುದೇ ನಷ್ಟ ಅಥವಾ ಹಾನಿ ಸಂಭವಿಸಿದ ಸಂದರ್ಭಗಳಲ್ಲಿ , Google ಮತ್ತು ಅದರ ಪೂರೈಕೆದಾರರು ಹಾಗೂ ವಿತರಕರು ಜವಬ್ದಾರರಾಗಿರುವುದಿಲ್ಲ

ಕೆಲವು ರಾಷ್ಟ್ರಗಳಲ್ಲಿ, ಗ್ರಾಹಕನಂತೆ ನೀವು ಕಾನೂನು ಹಕ್ಕುಗಳನ್ನು ಹೊಂದಿರಬಹುದೆಂದು ನಾವು ಗುರುತಿಸಿದ್ದೇವೆ. ನೀವು ಸೇವೆಗಳನ್ನು ನಿಮ್ಮ ಖಾಸಗಿ ಉದ್ದೇಶಗಳಿಗೆ ಬಳಸಿದಲ್ಲಿ, ಈ ನಿಯಮಗಳ ಯಾವ ಅಂಶವು ಅಥವಾ ಯಾವುದೇ ಹೆಚ್ಚುವರಿ ನಿಯಮಗಳು ಗ್ರಾಹಕನ ಕಾನೂನು ಹಕ್ಕುಗಳನ್ನು ನಿಯಂತ್ರಿಸುವುದಿಲ್ಲ ಇದು ಕರಾರು ಮೂಲಕ ಬಿಟ್ಟುಕೊಡಲು ಬರುವುದಿಲ್ಲ.

ನಮ್ಮ ಸೇವೆಗಳ ವ್ಯಾಪಾರ ಬಳಕೆಗಳು

ನಮ್ಮ ಸೇವೆಗಳನ್ನು ನೀವು ವ್ಯಾಪಾರಕ್ಕಾಗಿ ಬಳಸುವುದಾದಲ್ಲಿ, ಆ ವ್ಯಾಪಾರವು ಈ ನಿಯಮಗಳನ್ನು ಒಪ್ಪಿರುತ್ತದೆ ತೊಂದರೆ ಉಂಟುಮಾಡದ ಮತ್ತು ನಷ್ಟತುಂಬಿಕೊಡುವ Google ಮತ್ತು ಅದರ ಸದಸ್ಯರು, ಅಧಿಕಾರಿಗಳು, ಪ್ರತಿನಿಧಿಗಳು, ಹಾಗೂ ಹಕ್ಕುನಿರಾಕರಣೆಗಳಿಂದ ಬಂದಿರುವ ಸಿಬ್ಬಂದಿಗಳು, ಈ ಸೇವೆಗಳ ಬಳಕೆಗೆ ಅಥವಾ ಈ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ ಅಥವಾ ಇದರಿಂದ ಉದ್ಭವಿಸುವ ಅರ್ಜಿ ಅಥವಾ ಕಾರ್ಯವನ್ನು, ಯಾವುದೇ ಬಾಧ್ಯತೆಗಳು ಅಥವಾ ಹಕ್ಕುಗಳಿಂದ, ನಷ್ಟಗಳಿಂದ, ಹಾನಿಗಳಿಂದ, ಅರ್ಜಿಗಳಿಂದ, ತೀರ್ಪುಗಳಿಂದ, ದಾವೆ ಹಾಕುವ ಖರ್ಚುಗಳು ಮತ್ತು ವಕೀಲರ ಸಂಭಾವನೆಗಳನ್ನು ಒಳಗೊಂಡಿರುವುದನ್ನು ಇದು ಇಟ್ಟುಕೊಳ್ಳುತ್ತದೆ.

ಈ ಸೇವೆಗಳ ಕುರಿತು

ಸೇವೆಗಳಿಗೆ ಅನ್ವಯವಾಗುವಂತಹ ಈ ನಿಯಮಗಳು ಅಥವಾ ಯಾವುದೇ ಹೆಚ್ಚುವರಿ ನಿಯಮಗಳನ್ನು ನಾವು ಮಾರ್ಪಡಿಸಬಹುದು, ಉದಾಹರಣೆಗೆ, ಬದಲಾದ ಕಾನೂನಿಗೆ , ಸೇವೆಗಳಿಗೆ ಅನುಗುಣವಾಗಿ ಆಗುವ ಬದಲಾವಣೆಗಳು. ನೀವು ನಿಯತವಾಗಿ ನಿಯಮಗಳನ್ನು ನೋಡುತ್ತಿರಬೇಕು. ಈ ಸೇವೆಗಳ ಮಾರ್ಪಡುಗಳ ಸೂಚನೆಗಳನ್ನು ನಾವು ಈ ಪುಟದಲ್ಲಿ ಪೋಸ್ಟ್ ಮಾಡುತ್ತೇವೆ. ಅನ್ವಯವಾಗುವ ಸೇವೆಗಳಲ್ಲಿ ಮಾರ್ಪಡಿಸಿದ ಹೆಚ್ಚುವರಿ ನಿಯಮಗಳ ಪ್ರಕಟಣೆಯನ್ನು ನಾವು ಪೋಸ್ಟ್ ಮಾಡುತ್ತೇವೆ. ಬದಲಾವಣೆಗಳು ಪ್ರತಿವರ್ತಿತವಾಗಿ ಅನ್ವಯವಾಗುವುದಿಲ್ಲ ಮತ್ತು ಅವುಗಳನ್ನು ಪೋಸ್ಟ್ ಮಾಡಿದ ಹದಿನಾಲ್ಕು ದಿನಗಳಿಗೂ ಮೊದಲು ಕಾರ್ಯಗತಗೊಳ್ಳುವುದಿಲ್ಲ. ಅದಾಗ್ಯೂ, ಸೇವೆಗಳ ಹೊಸ ಕಾರ್ಯಗಳನ್ನು ತೋರಿಸುವಂತಹ ಬದಲಾವಣೆಗಳು ಅಥವಾ ಕಾನೂನು ಕಾರಣಗಳಿಗೆ ಮಾಡಿದಂತಹ ಬದಲಾವಣೆಗಳು ತಕ್ಷಣವೇ ಕಾರ್ಯಗತಗೊಳ್ಳುತ್ತದೆ. ಮಾರ್ಪಾಡಾದ ಸೇವೆಗಳ ನಿಯಮಗಳಿಗೆ ನೀವು ಸಮ್ಮತಿಸದಿದ್ದಲ್ಲಿ, ಆ ಸೇವೆಗಳ ನಿಮ್ಮ ಬಳಕೆಯನ್ನು ನೀವು ನಿಲ್ಲಿಸಬೇಕು.

ಈ ನಿಯಮಗಳು ಮತ್ತು ಹೆಚ್ಚುವರಿ ನಿಯಮಗಳ ಮಧ್ಯೆ ಏನಾದರೂ ಸಂಘರ್ಷವಿದ್ದಲ್ಲಿ, ಆ ಸಂಘರ್ಷಕ್ಕಾಗಿ ಹೆಚ್ಚುವರಿ ನಿಯಮಗಳನ್ನು ನಾವು ನಿಯಂತ್ರಿಸುತ್ತೇವೆ.

ಈ ನಿಯಮಗಳು Google ಮತ್ತು ನಿಮ್ಮ ನಡುವಿನ ಸಂಬಂಧವನ್ನು ನಿಯಂತ್ರಿಸುತ್ತದೆ. ಮೂರನೇ ವ್ಯಕ್ತಿಗೆ ಪ್ರಯೋಜನವಾಗುವಂತಹ ಹಕ್ಕುಗಳನ್ನು ಅವರು ರಚಿಸುವುದಿಲ್ಲ.

ಈ ಸೇವೆಗಳನ್ನು ನೀವು ಅನುಸರಿಸದಿದ್ದಲ್ಲಿ , ಕೂಡಲೇ ನಾವು ಕ್ರಮ ತೆಗೆದುಕೊಳ್ಳದಿದ್ದಲ್ಲಿ, ಅದರರ್ಥ ನಾವು ಹೊಂದಿರುವ ಎಲ್ಲಾ ಹಕ್ಕುಗಳನ್ನು ವಿಸರ್ಜನೆ ಮಾಡಿದ್ದೇವೆ, ಕೈ ಬಿಟ್ಟಿದ್ದೇವೆ ಎಂದಲ್ಲ (ಭವಿಷ್ಯದಲ್ಲಿ ತೆಗೆದುಕೊಳ್ಳುವಂತಹ ಕ್ರಮಗಳು).

ನಿರ್ದಿಷ್ಟ ನಿಯಮವು ಜಾರಿಯಾಗಿಲ್ಲ ಎಂದು ಸಾಬೀತಾದಲ್ಲಿ, ಇತರ ಯಾವುದೇ ನಿಯಮಗಳ ಮೇಲೆ ಅದು ಪರಿಣಾಮ ಬೀರುವುದಿಲ್ಲ.

ಕೆಲವು ರಾಷ್ಟ್ರಗಳ ನ್ಯಾಯಾಲಯಗಳು ಹಲವು ಬಗೆಯ ವಿವಾದಗಳಿಗೆ ಕ್ಯಾಲಿಫೋರ್ನಿಯಾದ ಕಾನೂನನ್ನು ಪಾಲಿಸುವುದಿಲ್ಲ. ನೀವು ಅಂತಹ ಯಾವುದಾದರೂ ಒಂದು ರಾಷ್ಟ್ರದಲ್ಲಿ ವಾಸಿಸುತ್ತಿದ್ದರೆ , ಆಗ ಕ್ಯಾಲಿಫೋರ್ನಿಯಾ ಕಾನೂನಿಗೆ ಎಲ್ಲಿ ಮನ್ನಣೆ ಹೊರತುಪಡಿಸಲಾಗುತ್ತದೆ ಈ ನಿಯಮಗಳಿಗೆ ಸಂಬಂಧಿಸಿದಂತಹ ವಿವಾದಗಳಿಗೆ ನಿಮ್ಮ ರಾಷ್ಟ್ರದ ಕಾನೂನುಗಳು ಅನ್ವಯವಾಗುತ್ತವೆ. ಇಲ್ಲದಿದ್ದಲ್ಲಿ, ಕ್ಯಾಲಿಫೋರ್ನಿಯಾದ ಕಾನೂನು ನಿಯಮಗಳ ಆಯ್ಕೆಯನ್ನು ಹೊರತುಪಡಿಸಿ, ಅಮೆರಿಕಾದ ಕ್ಯಾಲಿಫೋರ್ನಿಯಾದ ಕಾನೂನುಗಳು, ಈ ನಿಯಮಗಳು ಅಥವಾ ಸೇವೆಗಳಿಗೆ ಸಂಬಂಧಿಸಿದ ಅಥವಾ ಇದರಿಂದ ಉದ್ಭವಿಸುವ ಯಾವುದೇ ವಿವಾದಗಳಿಗೆ ಅನ್ವಯವಾಗುತ್ತದೆ ಎಂಬುದನ್ನು ನೀವು ಒಪ್ಪಿಕೊಂಡಿದ್ದೀರಿ. ಅಂತೆಯೇ, ನಿಮ್ಮ ದೇಶದ ನ್ಯಾಯಾಲಯಗಳು, ಅಮೆರಿಕಾದ ಸಂತಕ್ಲಾರಾ ಪ್ರಾಂತ, ಕ್ಯಾಲಿಫೋರ್ನಿಯಾಗಳಲ್ಲಿರುವ ಕಾನೂನಿನವ್ಯಾಪ್ತಿಗೆ ಮತ್ತು ವಿಚಾರಣಾ ಸ್ಥಳ ಅನುಮೋದಿಸುಲು ನಿಮಗೆ ಅನುಮತಿ ನೀಡದೇ ಇದ್ದಲ್ಲಿ , ಈ ನಿಯಮಗಳಿಗೆ ಸಂಬಂಧಿಸಿದ ವಿವಾದಗಳಿಗೆ ನಿಮ್ಮ ಸ್ಥಳೀಯ ಕಾನೂನಿನವ್ಯಾಪ್ತಿ ಮತ್ತು ವಿಚಾರಣಾ ಸ್ಥಳ ಅನ್ವಯವಾಗುತ್ತವೆ. ಇಲ್ಲವಾದಲ್ಲಿ, ಈ ನಿಯಮಗಳು ಅಥವಾ ಸೇವೆಗಳಿಗೆ ಸಂಬಂಧಿಸಿದ ಅಥವಾ ಇದರಿಂದ ಉದ್ಭವಿಸಿದ ಎಲ್ಲಾ ಹಕ್ಕುಗಳನ್ನು, ಪ್ರತ್ಯೇಕವಾಗಿ ಸಂತ ಕ್ಲಾರಾ ಪ್ರಾಂತದ ರಾಜ್ಯ ಅಥವಾ ಸಂಯುಕ್ತ ನ್ಯಾಯಾಲಯ, ಕ್ಯಾಲಿಫೋರ್ನಿಯಾ, U.S.A. (the federal or state courts of Santa Clara County, California, USA) ದಲ್ಲಿ ದಾವೆ ಮಾಡಲಾಗುತ್ತದೆ, ಮತ್ತು ನೀವು ಹಾಗೂ ಗೂಗಲ್ (Google) ಆ ನ್ಯಾಯಾಲಯಗಳಲ್ಲಿ ವೈಯಕ್ತಿಕ ಕಾನೂನಿನವ್ಯಾಪ್ತಿಯನ್ನು ಒಪ್ಪಿರುತ್ತೀರಿ.

Google ಅನ್ನು ಸಂಪರ್ಕಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಸಂಪರ್ಕದ ಪುಟಕ್ಕೆ ಭೇಟಿ ನೀಡಿ.

Google Apps
ಪ್ರಮುಖ ಮೆನು